ಅಧಿಕೃತ ವೆಬ್ ಸೈಟ್ ಜಿಲ್ಲಾ ಪಂಚಾಯತ್ ತುಮಕೂರು
ಜಿಲ್ಲಾ ಪಂಚಾಯತ್, ತುಮಕೂರು

ತುಮಕೂರು ಜಿಲ್ಲಾ ಪಂಚಾಯತ್ ಬಗ್ಗೆ: ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ರಲ್ಲಿ ಜಿಲ್ಲಾ ಪಂಚಾಯತ್ ರಚನೆಯಾಗಿರುತ್ತದೆ. ಕೇಂದ್ರಿಕೃತ ಯೋಜನೆ ಮತ್ತು ಇನ್ನಿತರೆ ಕಾರ್ಯಕ್ರಮಗಳ ಅಭಿವೃದ್ಧಿ  ಕೆಳ ಹಂತವರೆವಿಗೂ ಅನುಷ್ಟಾನಗೊಳಿಸಲಾಗುತ್ತದೆ. ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993ಗೆ ಅನುಗುಣವಾಗಿ ಮೂರು ಹಂತ  ಅಡಳಿತ ವಿಧಾನ  ಪ್ರಾರಂಭವಾಯಿತು, ಅಂದರೆ  ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲುಕು ಮಟ್ಟದಲ್ಲಿ ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಮಟ್ಟದಲ್ಲಿ ಗ್ರಾಮ  ಪಂಚಾಯತ್.  ತುಮಕೂರು ಜಿಲ್ಲಾ ಪಂಚಾಯತಿಯು  57 ಚುನಾಯಿತ ಜಿ.ಪಂ. ಸದಸ್ಯರನ್ನು  ಹೊಂದಿದ್ದು ಹಾಗೂ  ಆಡಳಿತ ವಿಭಾಗಗಳು ಹೊಂದಿರುತ್ತದೆ. ಆಡಳಿತ ಶಾಖೆ ಅಭಿವೃದ್ಧಿ ಶಾಖೆ, ಯೋಜನಾ ಶಾಖೆ, ಲೆಕ್ಕ ಪತ್ರ ಶಾಖೆ, ಮತ್ತು ಸಭಾ ಶಾಖೆಯ ಅಧಿಕಾರಿ / ಸಿಬ್ಬಂದಿ ವರ್ಗದವರಿಂದ ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಿಸುತ್ತದೆ.

 

new 

new ಸಂಜೀವಿನಿ/NRLM ಕಾರ್ಯಕ್ರಮದಡಿ ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲೆಯ 10 ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕಗಳಿಗೆ ತಾಲ್ಲೂಕು ಕಾರ್ಯಕ್ರಮ ವ್ಯವಸ್ಥಾಪಕ(TPM) ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಸಂಬಂಧ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ವಿವರ

new ಸಂಜೀವಿನಿ/NRLM ಕಾರ್ಯಕ್ರಮದಡಿ ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲೆಯ 10 ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕಗಳಿಗೆ ವಲಯ ಮೇಲ್ವಿಚಾರಕ(CS) ಸಿಬ್ಬಂದಿಗಳನ್ನು ನೇಮಿಸಿಕೊಳ್ಳುವ ಸಂಬಂಧ ಮುಖ್ಯ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳ ವಿವರ

new ತುಮಕೂರು ಜಿಲ್ಲೆಯ ಸಂಜೀವಿನಿ NRLM ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕಗಳಿಗೆ ಸಿಬ್ಬಂದಿ ನೇಮಕಾತಿ ಮಾರ್ಗಸೂಚಿ

new ಸಂಜೀವಿನಿ NRLM ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕಗಳಿಗೆ ಸಿಬ್ಬಂದಿ ನೇಮಕಾತಿ ಪ್ರಕಟಣೆ

new ತಾಲ್ಲೂಕು ಅಭಿಯಾನ ನಿರ್ವಹಣಾ ಘಟಕಗಳಿಗೆ ಸಿಬ್ಬಂದಿ ನೇಮಕಾತಿಯ ಅರ್ಜಿ ನಮೂನೆ

ಜಿಲ್ಲಾ ಪಂಚಾಯತ್ ರಚನೆ: (ಸೆಕ್ಷನ್ 159 ಪುಟ ಸಂ.135 )
  1. ಜಿಲ್ಲಾ ಪಂಚಾಯತ್ ನಲ್ಲಿ 57 ಚುನಾಯಿತ ಜಿಲ್ಲಾ ಪಂಚಾಯತ್ ಸದಸ್ಯರಿದ್ದು 57 ಕ್ಷೇತ್ರಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳ  ಗ್ರಾಮೀಣ ಪ್ರದೇಶಗಳಲ್ಲಿ   ರಚನೆಯಾಗಿರುತ್ತದೆ. ಈ ಚುನಾಯುತ ಪ್ರತಿನಿಧಿಗಳ ಅವಧಿ  5 ವರ್ಷಗಳು
  2. ಜಿಲ್ಲೆಯ ವ್ಯಾಪ್ತಿಯೊಳಗೆ ಮತದಾರರೆಂದು ನೋಂದಾಯಿತರಾದ ರಾಜ್ಯ ಸಭೆಯ ಸದಸ್ಯರನ್ನು ಮತ್ತು ರಾಜ್ಯ ವಿಧಾನ ಪರಿಷತ್ತಿನ ಸದಸ್ಯರನ್ನು
  3. ಲೋಕಸಭೆಯ ಮತ್ತು ರಾಜ್ಯ ವಿಧಾನ ಸಭೆಯ ಯಾವ ಸದಸ್ಯರ ಚುನಾವಣೆ ಕ್ಷೇತ್ರಗಳು ಜಿಲ್ಲೆಯ  ವ್ಯಾಪ್ತಿಯೊಳಗೆ ಇರುವುವೋ ಅಂಥ ಜಿಲ್ಲೆಯ ಒಂದು ಭಾಗವನ್ನು ಅಥವಾ ಸಮಗ್ರ ಜಿಲ್ಲೆಯನ್ನು ಪ್ರತಿನಿಧಿಸುವ ಸದಸ್ಯರುರಾಗಿರುತ್ತಾರೆ.
  4. ಜಿಲ್ಲೆಯ10  ತಾಲ್ಲೂಕು ಪಂಚಾಯತಿಗಳ ಅಧ್ಯಕ್ಷರುಗಳು.

ಅಧ್ಯಕ್ಷರು: ಜಿಲ್ಲಾ ಪಂಚಾಯತ್ ಚುನಾಯಿತ ಸದಸ್ಯರಿಂದ   ಆಯ್ಕೆಯಾಗುತ್ತಾರೆ. ಅಧ್ಯಕ್ಷರು ಜಿಲ್ಲಾ ಪಂಚಾಯತಿಯ ಮುಖ್ಯಸ್ಥರುರಾಗಿರುತ್ತಾರೆ ಹಾಗೂ ಪದ ನಿಮಿತ್ತ ಹಣಕಾಸು ಮತ್ತು  ಲೆಕ್ಕ ಪರಿಶೋಧನೆ , ಯೋಜನಾ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರುರಾಗಿರುತ್ತಾರೆ.

 

ಉಪಾಧ್ಯಕ್ಷರು: ಜಿಲ್ಲಾ ಪಂಚಾಯತ್ ಚುನಾಯಿತ ಸದಸ್ಯರಿಂದ  ಆಯ್ಕೆಯಾಗುತ್ತಾರೆ.   ಅಧ್ಯಕ್ಷರು ಇಲ್ಲದಿದ್ದ ಸಮಯದಲ್ಲಿ ಉಪಾಧ್ಯಕ್ಷರು ಇವರ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ.  ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರು ಪದನಿಮಿತ್ತ ಸಾಮಾನ್ಯ ಸ್ಥಾಯಿ ಸಮಿತಿಯ  ಅಧ್ಯಕ್ಷರಾಗಿರುತ್ತಾರೆ.

ಅಧ್ಯಕ್ಷರು

ಹೆಸರು : ಶ್ರೀಮತಿ ಲತಾರವಿಕುಮಾರ್
ವಿಳಾಸ: ಜಿಲ್ಲಾ ಪಂಚಾಯತ್, ತುಮಕೂರು
ಕಛೇರಿ : 0816-2278776
 
 
ಉಪಾಧ್ಯಕ್ಷರು

ಹೆಸರು: ಶ್ರೀಮತಿ ಶಾರದ ಎನ್ ನರಸಿಂಹಮೂರ್ತಿ
ವಿಳಾಸ: ಜಿಲ್ಲಾ ಪಂಚಾಯತ್, ತುಮಕೂರು.
ಕಛೇರಿ : 0816-2278725
 

ಸ್ಥಾಯಿ ಸಮಿತಿಗಳು:

ಜಿಲ್ಲಾ ಪಂಚಾಯತಿನ ಮುಖ್ಯವಾದ ವಿಷಯಗಳ ಮೇಲೆ ಚರ್ಚಿಸಿ ತೀರ್ಮಾನ ಕೈಗೊಳ್ಳಲು ಸ್ಥಾಯಿ ಸಮಿತಿಗಳಲ್ಲಿ 5 ಸಮಿತಿಗಳು ಇರುತ್ತದೆ. ಪ್ರತಿಯೊಂದು ಸ್ಥಾಯಿ ಸಮಿತಿಯು, ಜಿಲ್ಲಾ ಪಂಚಾಯಿತಿಯ ನಿರ್ಧಿಷ್ಠಪಡಿಸಿದಂತೆ ಜಿಲ್ಲಾ ಪಂಚಾಯಿತಿಯ ಸದಸ್ಯರುಗಳು ಚುನಾಯಿತ ಸದಸ್ಯರುಗಳ ಪೈಕಿಯಿಂದ ಚುನಾಯಿಸಿದ ಅಧ್ಯಕ್ಷನ್ನು ಸೇರಿ ಏಳನ್ನು(7) ಮೀರದಂಥ ಸಂಖ್ಯೆಯ ಸದಸ್ಯರುಗಳನ್ನು ಒಳಗೊಂಡಿರತಕ್ಕದ್ದು. ಈ ಸದಸ್ಯರನ್ನು ಸಾಮಾನ್ಯ ಸಭೆಯಲ್ಲಿ ಚುನಾಯಿಸಲಾಗುತ್ತದೆ. ಜಿಲ್ಲಾ ಪಂಚಾಯತಿಯ  ಈ ಕೆಳಕಂಡ ಸ್ಥಾಯೀ ಸಮಿತಿಗಳನ್ನು ಹೊಂದಿರತಕ್ಕದ್ದು ಎಂದರೆ
1. ಸಾಮಾನ್ಯ ಸ್ಥಾಯಿ ಸಮಿತಿ
2. ಹಣಕಾಸು ಮತ್ತು ಲೆಕ್ಕಪರಿಶೋಧನೆ ಮತ್ತು ಯೋಜನಾ ಸಮಿತಿ
3. ಸಾಮಾಜಿಕ ನ್ಯಾಯ  ಸಮಿತಿ
4. ಶಿಕ್ಷಣ ಮತ್ತು ಆರೋಗ್ಯ ಸಮಿತಿ
5. ಕೃಷಿ ಮತ್ತು ಕೈಗಾರಿಕಾ ಸಮಿತಿ

ಅವಧಿ :

5 ಸ್ಥಾಯಿ ಸಮಿತಿಗಳ  ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರ ಅವಧಿ 20  ತಿಂಗಳು ಆಗಿರುತ್ತಾರೆ.

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು:

ಸರ್ಕಾರವು ಜಿಲ್ಲಾ ಪಂಚಾಯತ್ ನ  ಸುಗುಮ ನಿರ್ವಹಣೆಗಾಗಿ  ಜಿಲ್ಲೆಯ ಜಿಲ್ಲಾಧಿಕಾರಿ ಹುದ್ದೆಗೆ ಕಡಿಮೆಯಿಲ್ಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಹುದ್ದೆಯನ್ನು ಸೃಷ್ಟಿಸಿದೆ ಮತ್ತು  ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು  ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ  ಒಳಪಡುವ  ಎಲ್ಲಾ ಇಲಾಖೆಗಳಿಗೆ  ಸಂಬಂಧಿಸಿದಂತೆ  ಇಲಾಖಾ ಮುಖ್ಯಸ್ಥರ  ಸ್ಥಾನ ಹೊಂದಿದವರಾಗಿರುತ್ತಾರೆ

ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು

ಹೆಸರು : ಆನೀಸ್ ಕೆ ಜಾಯ್ ,IAS
ವಿಳಾಸ: ಜಿಲ್ಲಾ ಪಂಚಾಯತ್ ತುಮಕೂರು
ಮೊಬೈಲ್ : 94808-77000
ಕಛೇರಿ : 0816-2272898
ಇ-ಮೇಲ್ ವಿಳಾಸ: ceo_zp_tmk@nic.in
         
ಹೆಸರು : ಪ್ರಕಾಶ್
ಹೆಸರು : ಬಿ ಕೃಷ್ಣಪ್ಪ
ಹೆಸರು : ಶಿವನಂಜಪ್ಪ
ಹೆಸರು : ಬಾಲರಾಜು
ಹೆಸರು : ವೇದಮೂರ್ತಿ
ಉಪಕಾರ್ಯದರ್ಶ ಆಡಳಿತ
ಉಪಕಾರ್ಯದರ್ಶ ಅಭಿವೃದ್ಧಿ
ಮುಖ್ಯ ಲೆಕ್ಕಾಧಿಕಾರಿಗಳು
ಮುಖ್ಯ ಯೋಜನಾಧಿಕಾರಿಗಳು
ಯೋಜನಾ ನಿರ್ದೇಶಕರು
ಮೊಬೈಲ್ : 94808-77001
ಮೊಬೈಲ್ : 94808-77005
ಮೊಬೈಲ್ : 94808-77003
ಮೊಬೈಲ್ : 94808-77004
ಮೊಬೈಲ್ : 94808-77002
ಕಛೇರಿ : 0816- 2254297
ಕಛೇರಿ: 0816- 2272805
ಕಛೇರಿ : 0816-2272231
ಕಛೇರಿ : 0816- 2278390
ಕಛೇರಿ : 0816- 2272492

ಜಿಲ್ಲಾ ಪಂಚಾಯತ್ ರಚನೆ:

  ಜಿಲ್ಲಾ ಪಂಚಾಯತ್ ರಚನೆ

 

 

 

 

 

 

 

 

ಮೇಲೆ

logo
ವಿನ್ಯಾಸ ಮತ್ತು ಅಭಿವೃದ್ಧಿ ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ, ತುಮಕೂರು
ಮಾಹಿತಿ ಒದಗಿಸಿದವರು ಜಿಲ್ಲಾ ಪಂಚಾಯತ್, ತುಮಕೂರು.
ಇ-ಮೇಲ್: ceo_zp_tmk@nic.in